ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆಗೆ ಆಸ್ತಿ ವಿವಾದವೇ ಕಾರಣ ಅಂತ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಕೊಲೆಗಾರರಾದ ಮಹಾಂತೇಶ್, ಮಂಜುನಾಥ್ ಇಬ್ಬರೂ ಗುರೂಜಿ ನಂಬಿಕಸ್ಥರಾಗಿದ್ದರು. ಹಾಗಾಗಿ, ಇಬ್ಬರ ಹೆಸರಲ್ಲೂ ಗುರೂಜಿ ಆಸ್ತಿ ಮಾಡಿದ್ದರು. ಆದರೆ, ಆಪ್ತತೆಯನ್ನು ದುರ್ಬಳಕೆ ಮಾಡಿಕೊಂಡಿದ್ದ ಹಂತಕರು, ಗುರೂಜಿ ಹೆಸರು ಹೇಳಿಕೊಂಡು ತಾವು ಕೂಡ ಆಸ್ತಿ ಮಾಡಲು ಮುಂದಾಗಿದ್ದರು. ಇದನ್ನು ಅರಿತ ಚಂದ್ರಶೇಖರ್ ಗುರೂಜಿ ಇಬ್ಬರನ್ನೂ ಕೆಲಸದಿಂದ ತೆಗೆದು ಹಾಕಿ, ಅವರ ಹೆಸರಿನಲ್ಲಿ ಮಾಡಿದ್ದ ಆಸ್ತಿ ಹಿಂತಿರುಗಿಸುವಂತೆ ಕೇಳಿದ್ದರು. ಈ ವಿಚಾರವಾಗಿ ಪದೇ ಪದೇ ವಾಕ್ಸಮರ ನಡೆದಿತ್ತು. ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಅಂದಹಾಗೆ, ಹಂತಕರಲ್ಲಿ ಒಬ್ಬನಾದ ಮಹಂತೇಶ್ ಶಿರೂರು ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದವನು. ಸರಳವಾಸ್ತು ಸಂಸ್ಥೆಯ ಪ್ರತಿನಿಧಿಯಾಗಿ 2008ರಲ್ಲಿ ಕೆಲಸಕ್ಕೆ ಸೇರಿದವ ಸರಳ ವಾಸ್ತುವಿನ ಒಬ್ಬ ಪ್ರತಿನಿಧಿಯಾಗಿ ಬೆಳೆದಿದ್ದ. ಬಳಿಕ ಕರ್ನಾಟಕ ರಾಜ್ಯದ, ದೇಶದ ಪ್ರತಿನಿಧಿಗಳ ಮುಖ್ಯಸ್ಥರನಾಗಿ ಬಡ್ತಿ ಹೊಂದಿದ್ದ. ಹುಬ್ಬಳ್ಳಿಯ ಸರಳವಾಸ್ತು ಕಚೇರಿಯಲ್ಲಿ ವನಜಾಕ್ಷಿ ಎಂಬಾಕೆ ಪರಿಚಯವಾಗಿ, ಪ್ರೇಮಾಂಕುರವಾಗಿತ್ತು. ಗುರೂಜಿಯೇ ಮುಂದೆ ನಿಂತು 2013ರಲ್ಲಿ ಮದುವೆ ಮಾಡಿಸಿದ್ದರು. ಗುರೂಜಿ ನಿರ್ಮಿಸಿರುವ `ಗುರೂಜಿ ಗೋಕುಲ' ಎಂಬ ಅಪಾರ್ಟ್‍ಮೆಂಟ್‍ನಲ್ಲೇ ವಾಸವಾಗಿದ್ದರು. 2016ರಲ್ಲಿ ಮಹಾಂತೇಶ, 2019ರಲ್ಲಿ ಪತ್ನಿ ವನಜಾಕ್ಷಿ ಕೂಡ ಸರಳವಾಸ್ತು ಕಂಪನಿಯಿಂದ ಹೊರಬಿದ್ದಿದ್ದರು. ಈ ಮಧ್ಯೆ, ಆಸ್ತಿಯನ್ನು ಗುರೂಜಿ ವಾಪಸ್ ಕೇಳಿಯೇ ಇರಲಿಲ್ಲ ಅಂತಲೂ ಚರ್ಚೆ ಆಗ್ತಿದೆ. ಇವತ್ತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ, ಹುಬ್ಬಳ್ಳಿಯ ಸುಳ್ಳ ರಸ್ತೆಯ ಗುರೂಜಿ ಜಮೀನಿನಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆನಡೆಲಿದೆ.
#publictv #newscafe #hrranganath #chandrashekharguruji